Tuesday, March 25, 2025
Homeಸುದ್ದಿಗಳುಹಾಸನಮಹಿಳೆಯೊಬ್ಬರ ತಲೆಯನ್ನು ಒಡೆದ ಗ್ರಾಮ ಪಂಚಾಯತ್ ಸದಸ್ಯ

ಮಹಿಳೆಯೊಬ್ಬರ ತಲೆಯನ್ನು ಒಡೆದ ಗ್ರಾಮ ಪಂಚಾಯತ್ ಸದಸ್ಯ

ಮನೆಯ ಮುಂದೆ ರಸ್ತೆಯೆ ಬೇಡ ಎಂದು ಆವಾಜ್ ಹಾಕುತ್ತಿದ್ದ ಮಹಿಳೆಯೊಬ್ಬರ ತಲೆಯನ್ನು ಗ್ರಾಮ ಪಂಚಾಯತ್ ಸದಸ್ಯರೋರ್ವರು ಒಡೆದ ,ಘಟನೆ ಉಡುಪಿಯ ಆತ್ರಾಡಿಯಲ್ಲಿ ನಡೆದಿದೆ.

ಉಡುಪಿಯ ಆತ್ರಾಡಿಯ ಬಳಿ ಆರತಿಯವರ ಪಟ್ಟಾ ಜಾಗದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲು ತಯಾರು ಮಾಡಲಾಗಿತ್ತು. ಈ ಸಂದರ್ಭ ಮನೆಯವರಾದ ಆರತಿ ಆಕ್ಷೇಪಿಸಿದಾಗ ಅವರನ್ನು ಗ್ರಾಮ ಪಂಚಾಯತ್ ಸದಸ್ಯ ರತ್ನಾಕರ ಶೆಟ್ಟಿ ತಳ್ಳಿದ್ದಾರೆ.
ಆರತಿ ತನ್ನ ಚಪ್ಪಲಿಯಿಂದ ರತ್ನಾಕರ ಶೆಟ್ಟಿ ಮೇಲೆ ಹಲ್ಲೆ ಮಾಡಿದ್ದಾರೆ. ಇದರಿಂದ ಕೋಪಗೊಂಡ ಚಂದ್ರಹಾಸ ಶೆಟ್ಟಿ ಹಾಗೂ ಸಂತೋಷ್ ಪೂಜಾರಿ ಆರತಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಆ ಸಂದರ್ಭ ರತ್ನಾಕರ ಶೆಟ್ಟಿ ಛತ್ರಿಯ ಹಿಡಿಯಲ್ಲಿ ಹೊಡೆದು ಆರತಿಯವರನ್ನು ತಳ್ಳಿದಾಗ ಅವರ ತಲೆಗೆ ಗಂಭೀರ ಗಾಯವಾಗಿದೆ.

ಗಲಾಟೆ ತಡೆಯಲು ಬಂದ ಆರತಿ ಮಗಳ ಮೇಲೂ ಹಲ್ಲೆ ಮಾಡಲಾಗಿದೆ.

RELATED ARTICLES
- Advertisment -spot_img

Most Popular