ನವದೆಹಲಿ : ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಪ್ರಭಾವಿ ಪ್ರದರ್ಶನ ನೀಡಿದ ಭಾರತ ತಂಡ, ಮಂಗಳವಾರ ನಡೆದ ಪ್ರವಾಸಿ ದಕ್ಷಿಣ ಅಫ್ರಿಕಾ ವಿರುದ್ಧದ ಏಕ ದಿನ ಸರಣಿಯ ಮೂರನೇ ಪಂದ್ಯದಲ್ಲಿ ವಿಕೆಟ್‌ಗಳ ಭರ್ಜರಿ ವಿಜಯ ಸಾಧಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿಯನ್ನು ೨-೧ ಅಂತರದಿಂದ ಕೈವಶ ಮಾಡಿಕೊಂಡಿತು. ಪ್ರವಾಸದ ಆರಂಭದಲ್ಲಿ ನಡೆದಿದ್ದ ಟಿ೨೦ ಸರಣಿಯನ್ನೂ ರೋಹಿತ್ ಶರ್ಮ ನೇತೃತ್ವದ ಭಾರತ ತಂಡ ತನ್ನದಾಗಿಸಿಕೊಂಡಿತ್ತು. ಈ ಮೂಲಕ ಪ್ರವಾಸಿ ತಂಡ ಬರಿಗೈಯಲ್ಲಿ ವಾಪಸ್ ಹೋಗುವಂತಾಗಿದೆ.
ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಆಹ್ವಾನ ಪಡೆದ ದಕ್ಷಿಣ ಆಫ್ರಿಕಾ ತಂಡ ಭಾರತದ ಬೌಲರ್‌ಗಳ ಮಾರಕ ದಾಳಿಗೆ ಕುಸಿದು 27.1 ಓವರ್‌ಗಳಲ್ಲಿ 99 ರನ್‌ಗಳಿಗೆ ಆಲ್‌ಔಟ್ ಆಯಿತು. ಸಣ್ಣ ಗುರಿಯನ್ನು ಬೆನ್ನಟ್ಟಿದ ಶಿಖರ್ ಧವನ್ ನೇತೃತ್ವದ ಭಾರತ ತಂಡ 19.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 105 ರನ್ ಬಾರಿಸಿ ಜಯ ಸಾಧಿಸಿತು.
ಭಾರತ ಪರ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ 49 ರನ್ ಬಾರಿಸಿ ಒಂದು ರನ್‌ನಿಂದ ಅರ್ಧ ಶತಕದಿಂದ ವಂಚಿತರಾದರು. ಅಂತೆಯೇ ಕಳೆದೆರಡು ಪಂದ್ಯಗಳಲ್ಲಿ ಭಾರತ ಪರ ಉತ್ತಮ ಬ್ಯಾಟಿಂಗ್ ಮಾಡಿದ್ದ ಶ್ರೇಯಸ್ ಅಯ್ಯ 28 ರನ್ ಬಾರಿಸಿದರು. ದಕ್ಷಿಣ ಆಫ್ರಿಕಾ ಬೌಲಿಂಗ್ ವಿಭಾಗದಲ್ಲಿ ಲುಂಗಿ ಎನ್‌ಗಿಡಿ ಹಾಗೂ ಬಿಯಾರ್ನ್ ಪೊರ್ಟಾನ್ ತಲಾ ಒಂದು ವಿಕೆಟ್ ಕಬಳಿಸಿದರು. ನಾಯಕ ಶಿಖರ್ ಧವನ್ 8 ಮತ್ತೆ ಬ್ಯಾಟಿಂಗ್ ವೈಫಲ್ಯ ಎದುರಿಸಿದರೆ, ಇಶಾನ್ ಕಿಶನ್ 10 ರನ್‌ಗಳಿಗೆ ಸೀಮಿತಗೊಂಡರು.
ಭಾರತದ ಬೌಲರ್‌ಗಳ ಮಾರಕ ದಾಳಿ
ಅದಕ್ಕಿಂತ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ಟೀಮ್ ಇಂಡಿಯಾದ ಬೌಲಿಂಗ್ ದಾಳಿಗೆ ಬೆದರಿ ಸತತವಾಗಿ ವಿಕೆಟ್ ಒಪ್ಪಿಸಿತು. ಹೀಗಾಗಿ ಸಣ್ಣ ಮೊತ್ತಕ್ಕೆ ಇನಿಂಗ್ಸ್ ಆಟ ಕೊನೆಗೊಳಿಸಿತು. ದಕ್ಷಿಣ ಆಫ್ರಿಕಾ ಪರ ಹನ್ರಿಚ್ ಕ್ಲಾಸೆನ್ (34) ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಭಾರತದ ಬೌಲಿಂಗ್ ವಿಭಾಗದಲ್ಲಿ ಕುಲ್ಲೀಪ್ ಯಾದವ್ 18 ರನ್‌ಗಳಿಗೆ 4 ವಿಕೆಟ್ ಕಬಳಿಸಿದರೆ, ಶಹಬಾಜ್ ಅಹಮದ್, ಮೊಹಮ್ಮದ್ ಸಿರಾಜ್ ಹಾಗೂ ವಾಷಿಂಗ್ಟನ್ ಸುಂದರ್ ತಲಾ ಎರಡು ವಿಕೆಟ್ ಕಿತ್ತರು.
ಸ್ಕೋರ್ ವಿವರ
ದಕ್ಷಿಣ ಆಫ್ರಿಕಾ: 27.1 ಓವರ್‌ಗಳಲ್ಲಿ 99 (ಹೆನ್ರಿಚ್ ಕ್ಲಾಸೆನ್ 34, ಮಾರ್ಕೊ ಜಾನ್ಸನ್ 14, ಕುಲೀಪ್ ಯಾದವ್ 18ಕ್ಕೆ 4, ವಾಷಿಂಗ್ಟನ್ ಸುಂದರ್ 15ಕ್ಕೆ 2, ಮೊಹಮ್ಮದ್ ಸಿರಾಜ್ 14ಕ್ಕೆ 2).
ಭಾರತ: 19.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 105 (ಶುಭಮನ್ ಗಿಲ್ 49, ಶ್ರೇಯಸ್ ಅಯ್ಯರ್ 28, ಲುಂಗಿ ಎನ್‌ಗಿಡಿ 21ಕ್ಕೆ1).
ಅಂತಿಮ ಪಂದ್ಯದ ಪಂದ್ಯ ಪುರಷೋತ್ತಮ: ಕುಲ್ ದೀಪ್ ಯಾದವ್,
ಸರಣಿ ಶ್ರೇಷ್ಠ: ಮೊಹಮ್ಮದ್ ಸಿರಾಜ್