ಲಾರಿ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ದುರಂತ
ಸಕಲೇಶಪುರ : ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆಯುತ್ತಿರುವ ಚತುಷ್ಪದ ಹೆದ್ದಾರಿ ಕಾಮಗಾರಿಯಿಂದ ಅಪಘಾತಗಳ ಸರಮಾಲೆ ನೆಡೆಯುತ್ತಿದೆ.ಇಂದು ಬೆಳಿಗ್ಗೆ ಬಾಗೆ ಬಳಿ ಲಾರಿ ಚಾಲಕನ ಸಮಯ ಪ್ರಜ್ಞೆಯಿಂದ ಕಾರಿಗೆ ಡಿಕ್ಕಿಯಾವುದನ್ನು ತಪ್ಪಿದೆ. ಲಾರಿ ನಡು ರಸ್ತೆಯಲ್ಲಿ ಅಳವಡಿಸಿರುವ ಸಿಮೆಂಟ್ ಬ್ಲಾಕ್ ಗಳಿಗೆ ಡಿಕ್ಕಿಯಾಗಿದೆ.
ಬೆಂಗಳೂರು ಕಡೆಯಿಂದ ಸರಕು ತುಂಬಿಕೊಂಡು ಮಂಗಳೂರು ಕಡೆಗೆ ತೆರಳುತ್ತಿದ್ದ ಲಾರಿ ಸಕಲೇಶಪುರ ಕಡೆಯಿಂದ ಬರುತ್ತಿದ್ದ ಕಾರು ಚಾಲಕನ ಅಜಾಗರುಕತೆಯಿಂದ ಒನ್ ವೇ ನಲ್ಲಿ ಸಂಚಾರಿದ ಪರಿಣಾಮ ಲಾರಿ ಕಾರಿಗೆ ಅಪಘಾತವಾಗುವುದನ್ನು ತಪ್ಪಿಸಲು ಹೋಗಿ ಪಕ್ಕದಲ್ಲಿದ್ದ ಡಿವೈಡರ್ ಗಳ ಮೇಲೆ ಹತ್ತಿ ನಿಂತಿದೆ.ಪರಿಣಾಮ ಲಾರಿಯ ಮುಂಭಾಗ ನಜ್ಜುಗುಜ್ಜಾಗಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು ಎಲ್ಲೆಂದರಲ್ಲಿ ಯಾವುದೇ ಸೂಚನಾ ಫಲಕ ಅಳವಡಿಸದೆ ರಾತ್ರೋರಾತ್ರಿ ಅವಜ್ಞಾನಿಕವಾಗಿ ಡಿವೈಡರ್ ಗಳನ್ನು ಅಳವಡಿಸುವುದರಿಂದ ಅಪಘಾತಗಳು ಸಂಭವಿಸುತ್ತದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಒಂದು ವಾರದ ಹಿಂದೆ ಅಷ್ಟೇ ಬೈಕ್ ಅಪಘಾತ ವಾಗಿ ಇಬ್ಬರು ಮೃತಪಟ್ಟಿದ್ದರು.