ಜನರ ಅವಶ್ಯಕತೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಸದಾ ಕಾರ್ಯತತ್ಪರರಾಗಬೇಕು ಎಂದು ಸಕಲೇಶಪುರ ಶಾಸಕ ಹೆಚ್. ಕೆ. ಕುಮಾರ ಸ್ವಾಮಿ ತಿಳಿಸಿದ್ದಾರೆ.
ಸಕಲೇಶಪುರ ತಾಲೂಕು ಮಟ್ಟದ ಕೆ ಡಿ ಪಿ ಸಭೆಯಲ್ಲಿ ಭಾಗವಹಿಸಿದ ಅವರು ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದರು.
ತಾಲೂಕಿನಲ್ಲಿ ಶಿಕ್ಷಕರ ಕೊರತೆ ಬಗ್ಗೆ ಶಾಸಕರು ವಿವರ ಕೇಳಿದಾಗ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಾನಂದ ರವರು 60 ಶಿಕ್ಷಕರ ಕೊರತೆ ಇರುವುದನ್ನು ತಿಳಿಸಿದರು. ಡಿ, ಎಡ್ ಹಾಗೂ ಟಿ ಟಿ ಐ ಆದ ಅಭ್ಯರ್ಥಿಗಳಿದ್ದರೆ ಶಿಕ್ಷಣ ಇಲಾಖೆಯನ್ನು ಸಂಪರ್ಕ ಮಾಡಬಹುದು ಎಂದು ಶಾಸಕರು ತಿಳಿಸಿದರು.
*ಎತ್ತಿನ ಹೊಳೆ ಅಧಿಕಾರಿಗಳ ಉದ್ದಟತನ
ಎತ್ತಿನ ಹೊಳೆ ಕಾಮಗಾರಿ ಬಗ್ಗೆ ಮಾತನಾಡಿದ ಕೆ ಡಿ ಪಿ ಸದಸ್ಯ ಮೇಘ ರಾಜ್ ಮಾತನಾಡಿ ಎತ್ತಿನ ಹೊಳೆ ಕಾಮಗಾರಿ ಬಗ್ಗೆ ವಿವರ ಕೇಳಿದ್ರೆ ಅಧಿಕಾರಿಗಳು ಉದ್ದಟ ತನ ದಿಂದ ಮಾತನಾಡುತ್ತಾರೆ ಎಂದರು.
ಬಾಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಜೈ ಶಂಕರ್ ಮಾತನಾಡಿ ಬಾಗೆ ಗ್ರಾಮದಲ್ಲಿ ರುದ್ರಭೂಮಿ,ನರೇಗಾ, ಸರ್ವೇ ಸಮಸ್ಯೆ ಬಗ್ಗೆ ತಿಳಿಸಿದರು. ಕೆಂದನ ಮನೆ ಬಳಿ ಮರ ಕಡಿಯುತ್ತಿದ್ದಾರೆ. ಅರಣ್ಯ ಇಲಾಖೆ ಕ್ರಮ ಕೈ ಗೊಳ್ಳಲಿ ಎಂದು ಹೇಳಿದರು.
ಹೊಸೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪೂರ್ಣಿಮಾ ಮಾತನಾಡಿ ಶೈಕ್ಷಣಿಕ ವಿಚಾರಗಳ ಗೊಂದಲ ಹಾಗೂ ಶಾಲೆಗಳಲ್ಲಿನ ಅವ್ಯವಸ್ಥೆ ಬಗ್ಗೆ ತಿಳಿಸಿದರು.
ಸತೀಶ್ ಕೊಲ್ಲಳ್ಳಿ ಮಾತನಾಡಿ ಹೊಳೆ ಮಲ್ಲೇಶ್ವರ ದೇವಸ್ಥಾನ ಬಳಿ ರುದ್ರಭೂಮಿ ಗೆ ಹೋಗಲು ರಸ್ತೆ ಸಮಸ್ಯೆ ಇದೆ ಎಂದರು.
*ಗ್ರಾಮ ಪಂಚಾಯತ್ ಗಳಲ್ಲಿ ಆದಾಯ ಹೆಚ್ಚಿಸಲು ಕ್ರಮ
ಪ್ರತಿ ಗ್ರಾಮ ಪಂಚಾಯತ್ ಗಳಲ್ಲಿ ಆದಾಯ ಹೆಚ್ಚಿಸಲು ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳು ಕ್ರಮ ಕೈಗೊಳ್ಳಿ ಎಂದು ಶಾಸಕರು ಐಈ ಸಂದರ್ಭದಲ್ಲಿ ತಿಳಿಸಿದರು.
ಆನೆಮಹಲ್ ಗ್ರಾಮ ಪಂಚಾಯತ್ ಅಧ್ಯಕ್ಷ ತಿಮ್ಮಯ್ಯರವರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರ ಕಾರ್ಯ ನಿರ್ವಹಣೆ ಸರಿಯಾಗಿಲ್ಲ ಎಂದು ಶಾಸಕರಲ್ಲಿ ಮನವಿ ಮಾಡಿದರು.
ಬೆಳಗೋಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಉಮಾ ಜಗದೀಶ್ ರವರು ಬೆಳಗೋಡ್ ನಲ್ಲಿ ಶಾಲೆ ಜಾಗದಲ್ಲಿ ಆಟೋ ಸ್ಟಾಂಡ್ ನಿರ್ಮಾಣ ಮಾಡುವ ಬಗ್ಗೆ ಪ್ರಸ್ತಾಪವಾಗುತ್ತಿದೆ ಎಂದು ಗಮನಕ್ಕೆ ಬಂದಿದೆ. ಈ ಬಗ್ಗೆ ವಿವರ ಅಗತ್ಯ ಎಂದರು.
*ರಸ್ತೆ ಬದಿಯಲ್ಲಿ ಗಿಡ ನೆಡುವ ಅರಣ್ಯ ಇಲಾಖೆ
ಅರಣ್ಯ ಅಂಚಿನ ರಸ್ತೆ ಬದಿಯಲ್ಲಿ ಅರಣ್ಯ ಇಲಾಖೆ ಗಿಡ ನೆಡುತ್ತಿದೆ. ಇದರಿಂದಾಗಿ ರಸ್ತೆ ಅಭಿವೃದ್ಧಿಗೆ ತೊಂದರೆ ಆಗಿದೆ ಎಂದು ಲೋಕೋಪಯೋಗಿ ಅಭಿಯಂತರ ವೆಂಕಟೇಶ್ ಶಾಸಕರ ಗಮನಕ್ಕೆ ತಂದರು.
ಫ್ಲೈಯಿಂಗ್ ಆಫೀಸರ್
ಕೆಲವು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಫ್ಲೈಯಿಂಗ್ ಆಫೀಸರ್ ತರ ಆಗಿದ್ದಾರೆ. ಸರಿಯಾಗಿ ಗ್ರಾಮ ಪಂಚಾಯತ್ ನಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿಲ್ಲ ಎಂದು ಗಮನಕ್ಕೆ ಬಂದಿದೆ. ಪ್ರತಿ ನಿತ್ಯ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಫೋನ್ ಮಾಡಿ ಈ ಬಗ್ಗೆ ವಿವರ ಕೇಳಿ ಎಂದು ತಾಲೂಕು ಪಂಚಾಯತ್ ಅಧಿಕಾರಿಗಳಿಗೆ ತಿಳಿಸಿದರು.
*ವಿದ್ಯುತ್ ಇಲಾಖೆ ಕಾರ್ಯವೈಖರಿ ಬಗ್ಗೆ ಅಸಮಾಧಾನ
ಸೆಸ್ಕಾಂ ಇಲಾಖೆ ಯ ವಿಚಾರ ಬಂದಾಗ ಸೆಸ್ಕಾಂ ಕಾರ್ಯ ವೈಖರಿ ಬಗ್ಗೆ ಶಾಸಕರು ಅಸಮಾಧಾನ ವ್ಯಕ್ತ ಪಡಿಸಿದರು. ಜನ ಫೋನ್ ಮಾಡಿದರೆ ಸೆಸ್ಕಾಂ ನೌಕರ ಫೋನ್ ತೆಗೆಯುತ್ತಿಲ್ಲ ಎಂದು ಜನ ದೂರು ನೀಡಿದ್ದಾರೆ ಎಂದು ಶಾಸಕರು ತಿಳಿಸಿದರು. ಮೆಸ್ಕಾಂ ಕಾರ್ಯ ನಿರ್ವಹಣೆ ಬಗ್ಗೆ ಸಂಪೂರ್ಣ ವಿವರ ಕೇಳಿದರು.
ಕೃಷಿ ಇಲಾಖೆ, ಆರೋಗ್ಯ ಇಲಾಖೆ, ವೈಲ್ಡ್ ಲೈಫ್, ಜಿಲ್ಲಾ ಪಂಚಾಯತ್ ಇಂಜಿನಿಯರ್ ವಿಭಾಗ ಇನ್ನಿತರ ಎಲ್ಲಾ ಇಲಾಖೆ ಗಳ ಕಾರ್ಯ ನಿರ್ವಹಣೆ ಬಗ್ಗೆ ಮಾಹಿತಿ ಕೇಳಿದರು
ಅರಣ್ಯ ಅಂಚಿನಲ್ಲಿ ಜಂಗಲ್ ಬೆಳೆದಿರುವುದರಿಂದ ಆನೆಗಳು ಬರೋದು ಜನರಿಗೆ ತಿಳಿಯುತ್ತಿಲ್ಲ. ಈ ಬಗ್ಗೆ ತೀವ್ರ ಗಮನ ಅಗತ್ಯ ಹಾಗೂ ಬೋರ್ ವೆಲ್ ಬಳಿ ಹಾಗೂ ನೀರು ನಿಂತಿರುವ ಸ್ಥಳದಲ್ಲಿ ಸೊಳ್ಳೆ ಉತ್ಪತ್ತಿ ಯಾಗದಂತೆ ಕ್ರಮ ಕೈಗೊಳ್ಳಿ ಎಂದು ಶಾಸಕರು ತಿಳಿಸಿದರು.
ಶಾಲೆ ಕಾಂಪೌಂಡ್ ನಿರ್ಮಾಣದ ಬಗ್ಗೆ ಉದೇವಾರ ಗ್ರಾಮ ಪಂಚಾಯತ್ ಅಧ್ಯಕ್ಷೆ ಮೈತ್ರ ಯೋಗೀಶ್ ತಿಳಿಸಿದರು.
ಈಶ್ವರಳ್ಳಿ ಸೇತುವೆ ನಿರ್ಮಾಣ ಕಾಮಗಾರಿ ಬಗ್ಗೆ ವಿವರ ಕೇಳಿದ ಶಾಸಕರು ಈ ಕಾಮಗಾರಿಯನ್ನು ಉದ್ಘಾಟನೆ ಮಾಡುವಂತೆ ತಿಳಿಸಿದರು.
ಅಡ್ಲ ಗ್ರಾಮಕ್ಕೆ ಸೇತುವೆ ನಿರ್ಮಾಣ ಮಾಡುವ ಬಗ್ಗೆ ಬೇಡಿಕೆ ಇರುವ ಬಗ್ಗೆ ಪ್ರಸ್ತಾಪ ಮಾಡಲಾಯಿತು.
ಮಳೆ ಹೆಚ್ಚು ಬಂದ ಪ್ರದೇಶಕ್ಕೆ ಭೇಟಿ ನೀಡಿ ಹಾನಿ ಪ್ರಮಾಣ ವರದಿ ಮಾಡುವಂತೆ ತೋಟಗಾರಿಕೆ ಇಲಾಖೆಯ ವಿಜಯ ಚಿತ್ರ ರಿಗೆ ತಿಳಿಸಿದರು.
ಗ್ರಾಮಗಳಲ್ಲಿನ ಅಂಗಡಿಗಳಲ್ಲಿ ಮದ್ಯ ಮಾರಾಟ ಆಗುತ್ತಿದೆ. ಇದರ ಬಗ್ಗೆ ಆಗಬೇಕಾದ ಕ್ರಮಗಳ ಬಗ್ಗೆ ತಿಳಿಸಿದರು.
ವೇದಿಕೆಯಲ್ಲಿ ಕಾರ್ಯನಿರ್ವಾಹಣಾಧಿಕಾರಿ ಹರೀಶ್, ತಹಸೀಲ್ದಾರ್ ಜೈ ಕುಮಾರ್, ಪಂಚಾಯತ್ ರಾಜ್ ಅಧಿಕಾರಿಗಳಾದ ಹರೀಶ್, ಆದಿತ್ಯ ವೇದಿಕೆಯಲ್ಲಿದ್ದರು