ಆನೆಮಹಲ್ ಗ್ರಾಮ ಪಂಚಾಯತ್ ಗ್ರಾಮ ಸಭೆಯು ಸೆ 15 ರಂದು ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ತಿಮ್ಮಯ್ಯರವರು ವಹಿಸಿಕೊಂಡಿದ್ದರು.
ನೋಡಲ್ ಅಧಿಕಾರಿಯಾಗಿ ತೋಟಗಾರಿಕಾ ಇಲಾಖೆ ಮನುರವರು ಉಪಸ್ಥಿತರಿದ್ದರು.
ನೀರು ಮತ್ತು ನೈರ್ಮಲ್ಯ ಇಲಾಖೆ: ಜಲಜೀವನ್ ಯೋಜನೆಯ ಕಾಮಗಾರಿ ಬಗ್ಗೆ ಗ್ರಾಮಸ್ಥರು ಇಲಾಖೆಯವರನ್ನು ಬಹಳಷ್ಟಿ ಪ್ರಶ್ನೆ ಮಾಡಿದರು, ಜಲಜೀವನ್ ಕಾಮಗಾರಿ ಸರಿಯಾದ ಕ್ರಮದಲ್ಲಿ ನಡೆಯುತ್ತಿಲ್ಲ ಅಲ್ಲಲ್ಲಿ ಪೈಪ್‌ಗಳನ್ನು ಹಾಕಿ ಮುಚ್ಚದೆ ಗುಂಡಿಗಳನ್ನೆಲ್ಲ ತೆಗೆದು ಬಿಟ್ಟಿರುತ್ತಾರೆ. ಇದು ಸರ್ಕಾರದ ಬೊಕ್ಕಸಕ್ಕೆ ನಷ್ಟವನ್ನು ತಂದಿದೆ ಎಂದು ದೂರಿದರು.
ಶಿಕ್ಷಣ ಇಲಾಖೆ : ಶಾಲೆಗಳಲ್ಲಿ ಎಲ್ಲಾ ಬೋರ್ಡ್‌ಗಳು ಹಳೆಯದಾಗಿದ್ದು, ಹೊಸಮಾರ್ಕರ್ ಬೋರ್ಡ್‌ಗಳನ್ನು ಅಳವಡಿಕೆ, ವಿದ್ಯುಚ್ಚಕ್ತಿ ಸಮಸ್ಯೆ, ಪುಸ್ತಕಗಳನ್ನು ಇಡಲು ಶಾಲೆಗೆ ಬೀರುವಿನ ಅಗತ್ಯತೆ ಬಗ್ಗೆ ಈ ಸಂದರ್ಭ ತಿಳಿಸಲಾಯಿತು. ಆನೆಮಹಲ್‌ನಲ್ಲಿ ರಸ್ತೆ ಬದಿ ಕೆಲಸ ಮಾಡಲು ಬಂದಿರುವ ಕೊಪ್ಪಳ ಮೂಲದ ಕುಟುಂಬದ ಮಕ್ಕಳು ಶಾಲೆಗೆ ಬರಲು ಆರಂಬಿಸಿದ್ದಾರೆ ಇವರಲ್ಲಿ ಯಾವುದೇ ದಾಖಲೆ ಇಲ್ಲ. ದಾಖಲೆಗಳಿಲ್ಲದೆ ಅವರನ್ನು ಶಾಲೆಗೆ ಕೂರಿಸಲು ಅವಕಾಶವಿಲ್ಲ. ದಾಖಲೆ ಬಂದ ನಂತರವೆ ಶಾಲೆಗೆ ದಾಖಲು ಮಾಡಿ ಎಂದು ಅವರಿಗೆ ತಿಳಿಸಲಾಗಿದೆ. ಅಲ್ಲಿಯವರೆಗೆ ಬರುವುದು ಬೇಡ ಎಂದು ತಿಳಿಸಲಾಗಿದೆ ಎಂದು ಉಮಾದೇವಿಯವರು ಹೇಳಿದರು. ಗ್ರಾಮ ಪಂಚಾಯತ್‌ಯಿಂದ ಶಾಲೆಯ ಸುತ್ತ ಯಾವುದೇ ಸ್ವಚ್ಚತೆಯನ್ನು ಮಾಡಿರುವುದಿಲ್ಲ ಎಂದಿದ್ದಕ್ಕೆ ಪಿಡಿಒ ರಘುರವರು ಅದು ಎಸ್.ಡಿ.ಎಂ.ಸಿ. ಗ್ರ್ಯಾಂಟ್ ಅಡಿ ಬರುವುದು ಗ್ರ್ಯಾಂಟ್ ಬಂದಿಲ್ಲ ಎಂದು ಹೇಳಿದರು. ಸತ್ತಿಗಾಲ್ ಶಾಲೆ ಮಳೆಯಿಂದ ಕುಸಿದು ಬೀಳುವಂತಾಗಿದೆ ಎಂದು ಅವರು ತಿಳಿಸಿದರು.
ವಿಕಲಚೇತನ ಕಲ್ಯಾಣ ಇಲಾಖೆ : ಶೇ 75 ಅಂಗವೈಕಲ್ಯ ಇರುವವವರಿಗೆ 800ರೂಗಳನ್ನು ಹಾಗೂ ಅದಕ್ಕಿಂತ ಹೆಚ್ಚಿನವರಿಗೆ 1400ರೂಗಳನ್ನು ಸರ್ಕಾರದಿಂದ ನೀಡಲಾಗುತ್ತಿದೆ. ಅಂಗವಿಕಲರಿಗೆ ಎಲ್ಲಾ ಸವಲತ್ತುಗಳು ಇಲಾಖೆಯಿಂದ ಸಿಗುತ್ತದೆ ಉಪಯೋಗಿಸಿಕೊಳ್ಳಿ ಹಾಗೂ ಆನೆಮಹಲ್ ನಲ್ಲಿ 48 ಫಲಾನುಭವಿಗಳು ಇದ್ದಾರೆ ಎಂದು ಆಯೇಷಾರವರು ತಿಳಿಸಿದರು.
ಆರೋಗ್ಯ ಇಲಾಖೆಯಿಂದ ವನಿತಾ ಮಾತನಾಡಿ ಇ-ಸಂಜೀವಿನಿ ಆಪ್ ಡೌನ್ ಲೋಡ್ ಮಾಡಿಕೊಂಡು ಹಾಗೆ ಅಬಾ ಯೋಜನೆಯನ್ನು ಉಪಯೋಗಿಸಿಕೊಳ್ಳಿ . ಪಿಎಂಎಸ್‌ಎಲ್ ಯೋಜನೆಯಲ್ಲಿ ಆಶಾ ಕಾರ್ಯಕರ್ತೆಯರೆ ಗರ್ಭಿಣಿಯರನ್ನು ನೋಡಿಕೊಂಡು ಬರುತ್ತಿದ್ದಾರೆ. ಆಸ್ಪತ್ರೆಯಲ್ಲಿ ಒಂದು ಬಾರಿ ಮಾತ್ರ ಉಚಿತವಾಗಿ ಸ್ಕ್ಯಾನಿಂಗ್ ಅನ್ನು ಮಾಡುತ್ತಾರೆ. ಅಬಾ ಯೋಜನೆಯನ್ನು ಉಪಯೋಗಿಸಿಕೊಳ್ಳಿ.
ಆಯುಷ್ಮಾನ್ ಕಾರ್ಡ್ ಬಗ್ಗೆ ತಿಳಿದುಕೊಳ್ಳಬೇಕಾದರೆ ಎಬಿಆರ್‌ಕೆಯನ್ನು ಸಂಪರ್ಕಿಸಿ ಎಂದು ಹೇಲಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ; ಭಾಗ್ಯಲಕ್ಷ್ಮಿ ಯೋಜನೆ ಸುಕನ್ಯ ಯೋಜನೆ, ಮಾತೃ ವಂದನೆ ಯೋಜನೆ, ಉದ್ಯೋಗಿನಿ ಯೋಜನೆಯನ್ನು, ಕಿರು ಸಾಲ ಯೋಜನೆ, ಮಹಿಳಾ ಸ್ತ್ರೀ ಶಕ್ತಿ ಸಂಗದ ಸದುಪಯೋಗ ಪಡಿಸಿಕೊಳ್ಳಿ. ಎಂದು ಇಲಾಖಾಧಿಕಾರಿಗಳು ತಿಳಿಸಿದರು.
ಪೊಲಿಸ್ ಇಲಾಖೆಯ ಹೆಚ್. ಕೆ. ನಾಗರಾಜ್ ಭಾಗವಹಿಸಿ ಸಕಲೇಶಪುರ, ಅರಸೀಕೆರೆ ಹಾಗೂ ಹಾಸನಗಳಲ್ಲಿ ಗಾಂಜಾ ಕೇಸು ಹೆಚ್ಚುತ್ತಿದ್ದು, ವಿದ್ಯಾರ್ಥಿಗಳು ಗಾಂಜಾ ತೆಗೆದು ಕೊಳ್ಳುತ್ತಿದ್ದಾರೆ ಎಂಬ ಆಘಾತಕಾರಿ ವಿಚಾರವನ್ನು ತಿಳಿಸಿದರು. ಆದಷ್ಟು ಪೋಷಕರು ಮಕ್ಕಳ ಕಡೆ ಗಮನವಿಡಬೇಕು ಎಂದು ಹೇಳಿದರು
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾದ್ಯಕ್ಷರಾದ ಸುಹಾರ ಸಲೀಂ, ಸದಸ್ಯರಾದ ಚಂದ್ರಾವತಿ, ಕೆ.ಎ.ಹಸೈನರ್, ಮಹಮ್ಮದ್ ಅಶ್ರಫ್, ಮಂಜುಳಾ, ವಿರೂಪಾಕ್ಷ, ವೀರಭದ್ರ ,ಸುಮ, ಚನ್ನಮ್ಮ ಉಪಸ್ಥಿತರಿದ್ದರು.