Saturday, April 19, 2025
Homeಸುದ್ದಿಗಳುಅಕ್ರಮವಾಗಿ ಮರಳು ತೆಗೆಯುವಿಕೆ: ಇಬ್ಬರ ಬಂಧನ

ಅಕ್ರಮವಾಗಿ ಮರಳು ತೆಗೆಯುವಿಕೆ: ಇಬ್ಬರ ಬಂಧನ

ಸಕಲೇಶಪುರ: ತಾಲೂಕಿನ ಕುಡುಗರಹಳ್ಳಿ ಹತ್ತಿರದ ಹಳ್ಳದಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಅ.17 ರಂದು ರಾತ್ರಿ 8.15 ರ ಸುಮಾರಿಗೆ ಎಎಸ್ ಪಿ ಮಿಥುನ್ ಅವರಿಗೆ ನಗರಠಾಣಾ ವ್ಯಾಪ್ತಿಯ ಕುಡುಗರಹಳ್ಳಿ ಹತ್ತಿರ ಹಾದು ಹೋಗಿರುವ ಹಳ್ಳದಲ್ಲಿ ಯಾರೋ ಅಕ್ರಮವಾಗಿ ಟ್ರಾಕ್ಟರ್ನಲ್ಲಿ ಮರಳನ್ನು ತುಂಬಿ ಸಾಗಾಟ ಮಾಡುತ್ತಿರುತ್ತಾರೆಂದು ಬಂದ ಖಚಿತ ಮಾಹಿತಿ ಆಧಾರಿಸಿ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದರು.

ಈ ವೇಳೆ ಮರಳು ತುಂಬಿದ್ದ ಟ್ರ್ಯಾಕ್ಟರ್ ವೊಂದನ್ನು ಟ್ರೇಲರ್ ಜೊತೆಗೆ ವಶಪಡಿಸಿಕೊಂಡಿದ್ದು ಕುಡುಗರಹಳಿ ಬಡಾವಣೆಯ ಪ್ರವೀಣ ಮತ್ತು ಆದ್ರಾಮ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆ ಮಿತಿ ಮೀರಿದ್ದು ಎ.ಎಸ್.ಪಿ ಮಿಥುನ್ ಏನಾದರು ಈ ಧಂಧೆಯನ್ನು ತಡೆಗಟ್ಟುತ್ತಾರೆಯೆ ಎಂಬುದನ್ನು ಕಾದು ನೋಡಬೇಕಾಗಿದೆ.
Illegal sand extraction: Two arrested

RELATED ARTICLES
- Advertisment -spot_img

Most Popular